ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾ.ಪಂ. ವತಿಯಿಂದ ಕಾರಿಂಜ ಕ್ರಾಸ್ ನಲ್ಲಿ ಪ್ರಾರಂಭಿಸಲಾದ ಪುಸ್ತಕ ಗೂಡು ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ರಜನಿ ಪುಸ್ತಕ ಗೂಡು ಉದ್ಘಾಟಿಸಿ ಶುಭ ಹಾರೈಸಿದರು.
ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಪಿಡಿಒ ಪಂಕಜಾ ಶೆಟ್ಟಿ, ಸದಸ್ಯರಾದ ವೀರೇಂದ್ರ ಅಮೀನ್, ದಿನೇಶ್ ಪೂಜಾರಿ ಉಪಸ್ಥಿತರಿದ್ದರು.