ನವದೆಹಲಿ: ಹಿಮಾಚಲಪ್ರದೇಶದಲ್ಲಿ ಗಡಿ ನಿರ್ಮಾಣ ಸಂಸ್ಥೆ(ಬಿಆರ್‌ಒ) ನಿರ್ಮಾಣ ಮಾಡಿರುವ ಅಟಲ್ ಸುರಂಗ ಮಾರ್ಗವು ವಿಶ್ವ ದಾಖಲೆ ಮಾಡಿದೆ.
10,000 ಅಡಿಗಿಂತ ಎತ್ತರದಲ್ಲಿ ನಿರ್ಮಾಣವಾದ ಅಟಲ್ ಸುರಂಗ ಮಾರ್ಗವು 9.02 ಕಿ.ಮೀ ದೂರವಿದೆ. ಇದು ಹಿಮಾಚಲದ ಮನಾಲಿ ಮತ್ತು ಲಾಹೌಲ್-ಸ್ಪಿತಿಗಳನ್ನು ಜೋಡಿಸುತ್ತದೆ. ಇದನ್ನು ಅ.3 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ಅತಿ ಎತ್ತರದಲ್ಲಿ ನಿರ್ಮಾಣವಾದ ಹಾಗೂ ಸುದೀರ್ಘವಾದ ಸುರಂಗ ಮಾರ್ಗ ಎಂಬ ಕಾರಣಕ್ಕೆ ಇಂಗ್ಲೆಂಡ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಬಿಆರ್‌ಒ ಪ್ರಧಾನ ನಿರ್ದೇಶಕ ಲೆ.ಜ.ರಾಜೀವ್ ಚೌಧರಿಗೆ ವಿಶ್ವದಾಖಲೆ ಕುರಿತ ದಾಖಲೆಗಳನ್ನು ಹಸ್ತಾಂತರಿಸಿದೆ.