ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಈ ಹೊಸ ಮಾರ್ಗಸೂಚಿಯು ಫೆ.14 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ವಿದೇಶದಿಂದ ಬಂದ ಪ್ರಯಾಣಿಕರಿಗೆ ಈ ಹಿಂದೆ ಏಳು ದಿನಗಳ ಕಡ್ಡಾಯ ಹೋಮ್ ಕ್ವಾರಂಟೈನ್ ನಿಗಧಿಪಡಿಸಲಾಗಿತ್ತು. ಇದೀಗ ಏಳು ದಿನಗಳ ಹೋಮ್ ಕ್ವಾರಂಟೈನ್ ರದ್ದುಗೊಳಿಸಿ 14 ದಿನಗಳ ಸ್ವಯಂ ನಿಗಾ ವಹಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಮಾರ್ಗಸೂಚಿಯಲ್ಲಿ ಅಪಾಯವಿರುವ ರಾಷ್ಟ್ರಗಳು ಹಾಗೂ ಇತರ ಹಾಷ್ಟ್ರಗಳು ಎಂಬ ಪಟ್ಟಿಯನ್ನು ತೆಗೆದುಹಾಕಲಾಗಿದೆ. 82 ರಾಷ್ಟ್ರಗಳಿಂದ ಬರುವವರಿಗೆ ‘ಏರ್ ಸುವಿದಾ’ ಪೋರ್ಟಲ್‌ನಲ್ಲಿ ಪ್ರಯಾಣಕ್ಕೆ 72 ಗಂಟೆಗಳ ಮೊದಲು ಮಾಡಿಸಿದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಅಪ್‌ಲೋಡ್ ಮಾಡಬೇಕು. ಇದರೊಂದಿಗೆ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುವ ಆಯ್ಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.