Saturday, June 7, 2025

ಕಲಾವಿದನಾಗಿ ಪೇಚಿಗೆ ಸಿಲುಕಿದ ಸೆಕ್ಯುರಿಟಿ ಗಾರ್ಡ್

ಯೆಕಟೆರಿನ್ಬರ್ಗ್: ಕೆಲವೊಮ್ಮೆ ಏನೂ ಕೆಲಸ ಇಲ್ಲದೇ ಇರುವಾಗ ಬೋರ್ ಆಗುವುದು ಸಹಜ. ಆಗ ಕೈಗೆ ಸಿಕ್ಕ ವಸ್ತುವನ್ನು ಹಿಡಿದು ಎನಾದರೂ ಮಾಡುತ್ತಿರುತ್ತೇವೆ. ಇದೇ ರೀತಿ ಕೆಲಸಕ್ಕೆ ಬಂದ ಸೆಕ್ಯುರಿಟಿ ಗಾರ್ಡ್ ತನಗೆ ಬೋರ್ ಆಗುತ್ತಿದೆ ಎಂದು ಮುಖದ ಭಾಗಗಳನ್ನು ಬಿಡಿಸದ ವರ್ಣಚಿತ್ರದ ಮೇಲೆ ಕಣ್ಣುಗಳನ್ನು ಬಿಡಿಸಿದ ಘಟನೆ ರಷ್ಯಾದ ಯೆಕಟೆರಿನ್ಬರ್ಗ್ ಪ್ರದೇಶದ ಯೆಲ್ಟ್ಸಿನ್ ಎನ್ನುವ ಆರ್ಟ್​ ಗ್ಯಾಲರಿಯಲ್ಲಿ ನಡೆದಿದೆ.

ಸೆಕ್ಯುರಿಟಿ ಗಾರ್ಡ್ ವಿರೂಪಗೊಳಿಸಿದ ಚಿತ್ರವು 1930ರಲ್ಲಿ ರಚಿಸಲಾಗಿದೆ. ಇದಕ್ಕೆ ಸುಮಾರು 7.5 ಕೋಟಿ ರೂಗಳಿಗೆ ಇನ್ಸುರೆನ್ಸ್​ ಮಾಡಿಸಲಾಗಿದ್ದು, ಇದನ್ನು ಆರ್ಟ್​ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ಚಿತ್ರ ವಿರೂಪಗೊಳಿಸಿದ ಸೆಕ್ಯುರಿಟಿ ಗಾರ್ಡ್​ ಅನ್ನು ವಜಾಗೊಳಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಸಿದ್ಧ ವರ್ಣಚಿತ್ರಕಾರರು ಖಾಲಿ ಹಾಳೆಯ ಮೇಲೆ ಒಂದು ಗೆರೆ ಎಳೆದರೂ ಅದು ಕೋಟಿಗಟ್ಟಲೆ ಬೆಲೆಬಾಳುತ್ತದೆ. ಇನ್ನು ವರ್ಣಚಿತ್ರಗಳಿಗೆ ಮುಖವಿರುವುದು ಇಲ್ಲದೇ ಇರುವುದು ಲೆಕ್ಕಕ್ಕೆ ಇರುವುದಿಲ್ಲ. ಹೀಗೆ ಮುಖವಿರದ ಚಿತ್ರದ ಮೇಲೆ ಸೆಕ್ಯುರಿಟಿ ಗಾರ್ಡ್ ಒಬ್ಬ ಬಾಲ್​ ಪೆನ್​ಗಳನ್ನು ಬಳಕೆ ಮಾಡಿ ಕಣ್ಣಗಳನ್ನು ಬಿಡಿಸಿ ವಿರೂಪಗೊಳಿಸಿದ್ದಾನೆ. ಸದ್ಯ ಚಿತ್ರದಲ್ಲಿ ಕಣ್ಣುಗಳಿರದ ಹಾಗೂ ಕಣ್ಣುಗಳಿರುವ ಪೋಟೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles