2022 ರ ಐಪಿಎಲ್ ಹರಾಜು ಪ್ರಕ್ರಿಯೆ ಪ್ರಾರಂಭವಾಗಿದ್ದು ಮೊದಲ ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ರೈನಾಗೆ ನಿರಾಸೆ ಉಂಟಾಗಿದೆ. ಚೈನೈ ಸೂಪರ್ ಕಿಂಗ್ ಪರ ಈ ಹಿಂದೆ ಉತ್ತಮ ಪ್ರದರ್ಶನ ತೋರಿದ್ದ ರೈನಾರವರನ್ನ ಖರೀದಿಸಲು ಯಾವುದೇ ಪ್ರಾಂಚೈಸಿಗಳು ಮುಂದೆ ಬಂದಿಲ್ಲ.
ಹರಾಜು ಪ್ರಕ್ರಿಯೆಯಲ್ಲಿ ರೈನಾರವರ ಮೂಲ ಬೆಲೆ 2 ಕೋಟಿಯಾಗಿತ್ತು. ಪ್ರಾರಂಭದಲ್ಲಿ 2 ಕೋಟಿ ಮೂಲ ಬೆಲೆ ಘೋಷಿಸಿದಾಗ ಪ್ರಾಂಚೈಸಿಗಳು ಹಿಂದೇಟು ಹಾಕಿದ್ದು ರೈನಾ ಪಾಲಿಗೆ ತೀವ್ರ ನಿರಾಸೆ ಉಂಟುಮಾಡಿದೆ. ರೈನಾ ತವರು ತಂಡವೆಂದೇ ಖ್ಯಾತಿ ಹೊಂದಿರುವ ಚೈನೈ ಸೂಪರ್ ಕಿಂಗ್ಸ್ ಕೂಡ ಖರೀದಿಗೆ ಮುಂದಾಗದೆ ಇರೋದು ಅನೇಕ ಹಲಕ್ಕೆ ಕಾರಣವಾಗಿದೆ. ಮುಂದಿನ ಸುತ್ತಿನಲ್ಲಾದರು ರೈನಾಗೆ ಪ್ರಾಂಚೈಸಿಗಳು ಮಣೆಹಾಕುತ್ತ ಎನ್ನುವುದನ್ನ ಕಾದು ನೋಡಬೇಕಾಗಿದೆ.