ಪುಣೆ: ಖ್ಯಾತ ಉದ್ಯಮಿ ಮತ್ತು ಬಜಾಜ್ ಗ್ರೂಪ್ ಮಾಜಿ ಚೇರ್ಮನ್ ರಾಹುಲ್ ಬಜಾಜ್ ಇಂದು ಮಧ್ಯಾಹ್ನ ವಿಧಿವಶವಾಗಿದ್ದಾರೆ.
ರಾಹುಲ್ ಬಜಾಜ್ ಅವರು ನ್ಯುಮೋನಿಯಾ ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರೂಬಿ ಹಾಲ್ ಕ್ಲಿನಿಕ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪುರವೇಜ್ ಗ್ರಾಂಟ್ ತಿಳಿಸಿದ್ದಾರೆ.
ಇವರಿಗೆ 2001 ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿತ್ತು. ರಾಜ್ಯಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಪ್ರಿಲ್ 2021 ರಲ್ಲಿ ಬಜಾಜ್ ಗ್ರೂಪ್ ಮಾಜಿ ಚೇರ್ಮನ್ ಹುದ್ದೆಯಿಂದ ಕೆಳಗಿಳಿದಿದ್ದರು.