ಶ್ರೀಹರಿಕೋಟಾ: 2022ರ ಮೊದಲ ಮೊದಲ ಭೂ ವೀಕ್ಷಣಾ ಉಪಗ್ರಹ-04 (ಇಒಎಸ್-04) ವನ್ನು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಉಡಾವಣೆ ಮಾಡಲು ಸಜ್ಜಾಗಿದೆ.
ನಾಳೆ ಮುಂಜಾನೆ 5.59ಗಂಟೆಗೆ ಇಸ್ರೋ ಉಪಗ್ರಹ ಉಡಾವಣೆ ಮಾಡಲಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡ್ಡಯನ ನೆಲೆಯಿಂದ ಉಪಗ್ರಹ ಉಡಾವಣೆ ಮಾಡಲಾಗುತ್ತದೆ. ಇಒಎಸ್-04 ಉಪಗ್ರಹವನ್ನು ಪೋಲಾರ್ ಉಪಗ್ರಹ ಉಡಾವಣಾ ವಾಹಕ (ಪಿಎಸ್ಎಲ್ವಿ-ಸಿ52) ಹೊತ್ತೊಯ್ಯುತ್ತದೆ. ಅದೇ ರೀತಿ ಇಒಎಸ್-04 ರಾಡಾಡ್ ಇಮೇಜ್ ಉಪಗ್ರಹದ ಜೊತೆ ಇನ್ನೆರಡು ಉಪಗ್ರಹಗಳನ್ನು ಕೂಡ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ.