ನವದೆಹಲಿ: ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಇಂದು ಮುಂಜಾನೆ 6.17 ರ ವೇಳೆ ಭೂ ವೀಕ್ಷಣಾ ಉಪಗ್ರಹ (ಇಒಎಸ್-04)ವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
1710 ಕೆ.ಜಿ ತೂಕದ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ವನ್ನು ಪಿಎಸ್‌ಎಲ್‌ವಿ-ಸಿ52 (ಪೋಲಾರ್ ಉಪಗ್ರಹ) ಉಡಾವಣಾ ವಾಹಕವು ಇಂದು ಬೆಳಿಗ್ಗೆ ಬಾಹ್ಯಾಕಾಶ ಕೇಂದ್ರದಿಂದ 529 ಕಿ.ಮೀ ಎತ್ತರದ ಉದ್ದೇಶಿತ ಧ್ರುವೀಯ ಕಕ್ಷೆಗೆ ಹೊತ್ತೊಯ್ದಿದೆ.
ಇಂದು ಉಡಾವಣೆಗೊಂಡ ಇಒಎಸ್-04 ಉಪಗ್ರಹದೊಂದಿಗೆ INSPIRESat ಹಾಗೂ INSAT-2DT ಉಪಗ್ರಹಗಳು ಬಾಹ್ಯಾಕಾಶಕ್ಕೆ ಉಡಾವಣೆಗೊಂಡಿವೆ. INSPIRESat ಉಪಗ್ರಹವನ್ನು ವಿದ್ಯಾರ್ಥಿಗಳು ತಯಾರು ಮಾಡಿದ್ದಾರೆ. INSAT-2DT ಉಪಗ್ರಹವು ಒಂದು ಡಬ್ ಮಾಡಲಾದ ಬಾಹ್ಯಾಕಾಶ ನೌಕೆಯಾಗಿದೆ. ಇಒಎಸ್-04 ಉಪಗ್ರಹವು ರಾಡಾರ್ ಇಮೇಜಿಂಗ್ ಉಪಗ್ರಹವಾಗಿದೆ. ಯಾವ ರೀತಿಯ ವಾತಾವರಣವಿದ್ದರೂ ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನ ತೇವಾಂಶ, ಜಲವಿಜ್ಞಾನ, ಪ್ರವಾಹ ನಕ್ಷೆ ಅಪ್ಲಿಕೇಶನ್ಗಳಿಗೆ ಉತ್ತಮ ಗುಣಮಟ್ಟದ ಫೋಟೋಗಳನ್ನು ಒದಗಿಸುವಂತೆ ಈ ಉಪಗ್ರಹವನ್ನು ವಿನ್ಯಾಸ ಮಾಡಲಾಗಿದೆ.