ನವದೆಹಲಿ: ಚೀನಾದ 54 ಆ್ಯಪ್ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಸೋಮವಾರ ಹೊಸ ಆದೇಶವನ್ನು ಹೊರಡಿಸಿದ್ದು, ಅವುಗಳು ಭಾರತದ ಭದ್ರತೆಗೆ ಅಪಾಯವನ್ನುಂಟು ಮಾಡುವ ಆ್ಯಪ್ಗಳಾಗಿವೆ ಎಂದು ಹೇಳಲಾಗಿದೆ.
ಬ್ಯೂಟಿ ಕ್ಯಾಮರಾ, ಸ್ವೀಟ್ ಸೆಲ್ಫಿ ಹೆಚ್ಡಿ, ಈಕ್ವಲೈಜರ್, ಬಾಸ್ ಬೂಸ್ಟರ್, ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೈವರ್, ಒನ್ಮಿಯೊಜಿ ಚೆಸ್, ಆನ್ಮಿಯೊಜಿ ಅರೆನಾ, ಡ್ಯುಯಲ್ ಸ್ಟೇಸ್ ಲೈಟ್ ಸೇರಿದಂತೆ ಒಟ್ಟು 54 ಚೀನಿ ಆ್ಯಪ್ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ.
ಈ ಹಿಂದೆ 2ಬಾರಿ ಚೀನಾ ಆ್ಯಪ್ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮೂರನೇ ಬಾರಿ 54 ಚೀನಾ ಆ್ಯಪ್ಗಳನ್ನು ನಿಷೇಧಿಸಲು ಮುಂದಾಗಿದೆ.