ಇಂಡಿಯನ್ ಪ್ರೀಮಿಯರ್ ಲೀಗ್ 15 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದಿದ್ದು, ಈ ಪ್ರಕ್ರಿಯೆಯಲ್ಲಿ ಆರ್ಸಿಬಿ ತಂಡವು ಒಟ್ಟು 19 ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುಂಚೆ ಮೂವರು ಆಟಗಾರರನ್ನು ಆರ್ಸಿಬಿ ತಂಡವು ರಿಟೈನ್ ಮಾಡಿಕೊಂಡಿದ್ದು, ಇದರೊಂದಿಗೆ ಆರ್ಸಿಬಿಯಲ್ಲಿ ಒಟ್ಟು 22 ಆಟಗಾರರಿದ್ದಾರೆ. ಈ ಬಾರಿ ಆರ್ಸಿಬಿ ತಂಡದಲ್ಲಿ ಇಬ್ಬರು ಕನ್ನಡಿಗರಿರುವುದು ವಿಶೇಷ.
ಆರ್ಸಿಬಿ ತಂಡಕ್ಕೆ ಕರ್ನಾಟಕ ಯುವ ಆಟಗಾರ ಅನೀಶ್ವರ್ ಗೌತಮ್ ಹಾಗೂ ಕರ್ನಾಟಕದ ಆಟಗಾರ ಲವ್ನೀತ್ ಸಿಸೋಡಿಯಾ ಅವರು ಆರ್ಸಿಬಿ ಪರ ಆಡಲಿರುವ ಕನ್ನಡಿಗರು. ಅನೀಶ್ವರ್ ಗೌತಮ್ ಅವರನ್ನು 20 ಲಕ್ಷ ರೂಗೆ ಹಾಗೂ ಲವ್ನೀತ್ ಸಿಸೋಡಿಯಾ ಅವರನ್ನು 20 ಲಕ್ಷ ರೂಗೆ ಖರೀದಿ ಮಾಡಲಾಗಿದೆ.
19 ವರ್ಷದ ಅನೀಶ್ವರ್ ಗೌತಮ್ ಅವರು ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು, ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿದ್ದರು. ಲವ್ನೀತ್ ಸಿಸೋಡಿಯಾ ಅವರನ್ನು ಅಂತಿಮ ಸುತ್ತಿನಲ್ಲಿ ಆರ್ಸಿಬಿಯು ಖರೀದಿ ಮಾಡಿದೆ. 22 ವರ್ಷದ ಲವ್ನೀತ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದಾರೆ. ಇವರು ಈ ಹಿಂದೆ ಕರ್ನಾಟಕ ಪರ 14 ಟಿ20 ಪಂದ್ಯಗಳನ್ನಾಡಿದ್ದಾರೆ.
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವಾನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜಾಶ್ ಹೇಜಲ್ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಬೆಹ್ರೆನ್ಡಾರ್ಫ್, ಸುಯಾಶ್ ಪ್ರಭುದೇಸಾಯ್, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ಲವ್ನೀತ್ ಸಿಸೋಡಿಯಾ ಈ ಬಾರಿಯ ಆರ್ಸಿಬಿ ತಂಡದಲ್ಲಿರುವ ಆಟಗಾರರು.