ನವದೆಹಲಿ: ಏರ್ ಇಂಡಿಯಾದ ನೂತನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಟರ್ಕಿಷ್ ಏರ್ಲೈನ್ಸ್ನ ಮಾಜಿ ಚೇರ್ಪರ್ಸನ್ ಎಲ್ಕರ್ ಐಸಿ ಅವರನ್ನು ನೇಮಕ ಮಾಡಲಾಗಿದೆ ಎಂದು ಟಾಟಾ ಸನ್ಸ್ ಸೋಮವಾರ ತಿಳಿಸಿದೆ.
ಟರ್ಕಿಷ್ ಏರ್ಲೈನ್ಸ್ ಅನ್ನು ಚೇರ್ಪರ್ಸನ್ ಎಲ್ಕರ್ ಐಸಿ ಅವರು ಯಶಸ್ವಿಯಾಗಿ ಮುನ್ನಡೆಸಿದ್ದು, ಈ ಮೂಲಕ ಟಾಟಾ ಸನ್ಸ್ ಹೊಸ ಯುಗಕ್ಕೆ ಪ್ರವೇಶಿಸಲಿದೆ ಎಂದು ಟಾಟಾ ಸನ್ಸ್ ಚೇರ್ವುನ್ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ. ಎಲ್ಕರ್ ಐಸಿ ಅವರು ಇದೇ ಏಪ್ರಿಲ್ 1ಕ್ಕೆ ಅಥವಾ ಅದಕ್ಕೂ ಮೊದಲೇ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಟಾಟಾ ಸನ್ಸ್ ತಿಳಿಸಿದೆ.
ಟಾಟಾ ಗ್ರೂಪ್ ಸೇರುತ್ತಿರುವುದು ಏರ್ಲೈನ್ಸ್ ಅನ್ನು ಮುನ್ನಡೆಸುವ ಅವಕಾಶ ದೊರೆತಿರುವುದು ಗೌರವ ಹಾಗೂ ಸಂತೋಷದ ವಿಚಾರವೆಂದು ಎಲ್ಕರ್ ಐಸಿ ತಿಳಿಸಿದರು.