ಮಂಗಳೂರು: ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದ ಹಿನ್ನೆಲೆ 49 ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆದ ಘಟನೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ.
4 ಪದವಿ ಕಾಲೇಜಿನ 49 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಮನೆಗೆ ವಾಪಾಸ್ ಆಗಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ದಯಾನಂದ ಪೈ ಪದವಿ ಕಾಲೇಜಿನ 02, ಮುಲ್ಕಿ ಪೊಂಪೈ ಕಾಲೇಜಿನ 26, ಮುಲ್ಕಿ ಇಂದಿರಾ ಕಾಲೇಜಿನ 15 ಮತ್ತು ಮೂಡಬಿದ್ರೆ ಮಹಾವೀರ ಕಾಲೇಜಿನ 6 ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆಗಿದ್ದಾರೆ. ಈ ವೇಳೆ ಹಿಜಾಬ್ ತೆಗೆದು ಮುಡಿಪು ಪದವಿ ಕಾಲೇಜಿನ 22 ಮತ್ತು ಮೊಂಟೆಪದವು ಸರ್ಕಾರಿ ಕಾಲೇಜಿನ 11 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ.