Saturday, June 7, 2025

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಿನಿಮಾ ಸ್ಪರ್ಧೆಗೆ ‘ಆ 90 ದಿನಗಳು’ ಆಯ್ಕೆ

ಕುಂದಾಪುರ: ‘ಮಾಲ್ವಿಕ ಮೋಶನ್ ಪಿಚ್ಚರ್ಸ್’ ನಿರ್ಮಾಣದ ‘ಆ 90 ದಿನಗಳು’ ಚಿತ್ರವು ಮಾ.3ರಿಂದ ನಡೆಯಲಿರುವ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ಭಾರತೀಯ ಸಿನಿಮಾ ಸ್ಪರ್ಧೆಗೆ ಆಯ್ಕೆಯಾಗಿದೆ.

ಸ್ಪರ್ಧೆಯಲ್ಲಿ 55 ರಾಷ್ಟ್ರಗಳ 200 ಚಿತ್ರಗಳು ಭಾಗವಹಿಸಲಿದೆ. ಈ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಗುಲ್ವಾಡಿ ಟಾಕೀಸ್’ ಅರ್ಪಿಸುವ ರೊನಾಲ್ಡ್ ಲೋಬೊ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾಹಂದರವಿರುವ ‘ಆ 90 ದಿನಗಳು’ ಸಿನಿಮಾ ಸ್ಥಾನ ಪಡೆದಿದೆ.

ರತಿಕ್ ಮುರ್ಡೇಶ್ವರ್, ಭವ್ಯ, ರಾಧ ಭಗವತಿ, ಕೃತಿಕ ದಯಾನಂದ್, ಜೋ ಸೈಮನ್, ಪ್ರದೀಪ್ ಪೂಜಾರಿ, ಅಮೀರ್ ಹಂಝ, ಪಕೀರ್ ಸಲಾಂ, ರವಿ ಕಿರಣ್ ಮುರ್ಡೇಶ್ವರ ಮುಂತಾದವರ ತಾರಾಬಳಗವಿದೆ. ಚಿತ್ರಕ್ಕೆ ಕೃಷ್ಣ ಬಸ್ರೂರು ಅವರ ಸಂಗೀತ, ನಾಗೇಶ ಅವರ ಸಂಕಲನ, ಪ್ರಮೋದ ಮರವಂತೆ ಅವರ ಸಾಹಿತ್ಯ, ಪಿ.ವಿ.ಆರ್ ಸ್ವಾಮಿ ಗೂಗಾರ ದೊಡ್ಡಿ ಅವರ ಛಾಯಾಗ್ರಹಣವಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles