Saturday, June 7, 2025

ಪೂರ್ತಿ ಮನೆಯನ್ನೇ ಕದ್ದ ಕಳ್ಳರು…!

ವಾಷಿಂಗ್ಟನ್: ಕಳ್ಳರು ಮನೆಯಲ್ಲಿರುವ ವಸ್ತುಗಳನ್ನು ಕಳ್ಳತನ ಮಾಡುವುದು ಮಾಮೂಲು. ಆದರೆ ಪೂರ್ತಿ ಮನೆಯನ್ನೇ ಕಳ್ಳತನ ಮಾಡಿದ ಅಪರೂಪ ಘಟನೆ ಅಮೆರಿಕದ ಮಿಚಿಗನ್‌ನಲ್ಲಿ ನಡೆದಿದೆ.

ಮಿಚಿಗನ್‌ನ ವ್ಯಕ್ತಿಯೊಬ್ಬ 12-28 ಅಡಿಯ ಸಣ್ಣದೊಂದು ಕ್ಯಾಬಿನ್ ರೀತಿಯ ಮನೆಯಲ್ಲಿ ವಾಸಿಸುತ್ತಿದ್ದು, ಕಳೆದ ವರ್ಷದ ಅಂತ್ಯದಲ್ಲಿ ಕೆಲಸದನಿಮಿತ್ತ ಬೇರೆ ಊರಿಗೆ ಹೋಗಿ ತಿಂಗಳುಗಳ ಕಾಲ ನೆಲೆಸಿದ್ದರಂತೆ. ಆತ ತಿರುಗಿ ಬಂದಾಗ ಆತನ ಮನೆಯೇ ಕಳ್ಳತನವಾಗಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. 2021ರ ನ.18- ಡಿ.16ರ ನಡುವೆ ಕೋಲ್ಡ್ ಸ್ಪ್ರಿಂಗ್ ಟೌನ್‌ಶಿಪ್ ಬಳಿ ಇದ್ದ ಮನೆ ಕಳ್ಳತನವಾಗಿದೆ. ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles