ಮೂಡುಬಿದಿರೆ: ಹಿರಿಯ ಸ್ವರ್ಣೋದ್ಯಮಿ, ಕಮಲ್ ಜ್ಯುವೆಲ್ಸ್ ಮಾಲಕ ಪುತ್ತಿಗೆ ಮನೆ ಗೋಪಾಲ ಆಚಾರ್ಯ (82) ಅವರು ಗುರುವಾರ ನಿಧನರಾದರು.
ಗೋಪಾಲ ಆಚಾರ್ಯ ಅವರು ತನ್ನ ಸಹೋದರನೊಂದಿಗೆ 1980 ರಲ್ಲಿ ಎಂ.ಗಂಗಾಧರ ಆಚಾರ್ಯ ಆ್ಯಂಡ್ ಬ್ರದರ್ಸ್ ಜ್ಯುವೆಲ್ಲರ್ಸ್ ಪ್ರಾರಂಭಿಸಿ, ನಂತರ ಕಮಲ್ ಜ್ಯುವೆಲ್ಲರ್ಸ್ ಸ್ಥಾಪಿಸಿದರು. ಅವರು ಚಿನ್ನಬೆಳ್ಳಿ ವರ್ತಕರ ಸಂಘದ ಮಾಜಿ ಕೋಶಾಧಿಕಾರಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.