ಬಂಟ್ವಾಳ: ಕಲ್ಲಡ್ಕ ಸಮೀಪದ ಮೊಗನಾಡು ಸಾವಿರ ಸೀಮೆ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವವು ಮಾ.14 ರಿಂದ 19ರತನಕ ನಡೆಯಲಿದೆ.
ಈ ವೇಳೆ ದೀಪದ ಬಲಿ ಉತ್ಸವ, ದೇವರ ಬಲಿ ಉತ್ಸವ, ನಡುಬಲಿ-ಚಂದ್ರ ಮಂಡಲ ಉತ್ಸವ, ಕಟ್ಟೆ ಸವಾರಿ, ದೈವಗಳಿಗೆ ನೇಮೋತ್ಸವ, ಸುಡುಮದ್ದು ಪ್ರದರ್ಶನ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.