ಪಶ್ಚಿಮಬಂಗಾಳ: ತಮ್ಮ ಕಚ್ಚಾಬಾದಮ್ ಹಾಡಿನಿಂದ ದೇಶದಾಂದ್ಯಂತ ಪ್ರಸಿದ್ಧವಾದ ಗಾಯಕ ಬುಬನ್ ಬಡ್ಯಾಕರ್ ಅವರಿಗೆ ಪಶ್ಚಿಮ ಬಂಗಾಳದ ಬಿರ್ಭೂಮ್ನಲ್ಲಿ ಕಾರು ಅಪಘಾತವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಕಾರೊಂದನ್ನು ಖರೀದಿಸಿದ್ದು, ಅದನ್ನು ಓಡಿಸಲು ಕಲಿಯುತ್ತಿದ್ದ ವೇಳೆ ನಿನ್ನೆ ಈ ಅಪಘಾತ ಸಂಭವಿಸಿದೆ. ಈ ವೇಳೆ ಅವರ ಎದೆಗೆ ಗಾಯವಾಗಿದ್ದು ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಬನ್ ಅವರು ಕಡಲೆಕಾಯಿ ಮಾರಿ ತಮ್ಮ ಜೀವನ ಸಾಗಿಸುತ್ತಿದ್ದರು. ಇವರ ಕಚ್ಚಾ ಬಾದಾಮ್ ಹಾಡು ವೈರಲ್ ಆಗುತ್ತಿದ್ದಂತೆ ಇವರ ಲುಕ್ ಬದಲಾಗಿದ್ದು, ಸ್ಟಾರ್ ನಟ ಹಾಗೂ ನಟಿಯರೂ ಕೂಡ ಇವರ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸದ್ಯ ಅಪಘಾತದಲ್ಲಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.