ಲಂಡನ್: ಉಕ್ರೇನ್ ಅನ್ನು ತನ್ನ ವಶ ಮಾಡಿಕೊಳ್ಳಲು ರಷ್ಯಾ ಸೈನ್ಯವು ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಈ ಸಂದರ್ಭ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ರಷ್ಯಾವನ್ನು ಹೊರಹಾಕಲು ಸಿದ್ಧತೆ ನಡೆಯುತ್ತಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ(ಯುಎನ್ಎಸ್ಸಿ) ಐದು ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ರಷ್ಯಾವನ್ನು ತೆಗೆದುಹಾಕಲು ಬ್ರಿಟನ್ ಸರ್ಕಾರ ಯೋಜಿಸುತ್ತಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಯುಎನ್ಎಸ್ಸಿ ನ ಐದು ಖಾಯಂ ಸದಸ್ಯ ರಾಷ್ಟ್ರಗಳು ರಷ್ಯಾ, ಅಮೆರಿಕಾ, ಚೀನಾ ಮತ್ತು ಫ್ರಾನ್ಸ್ ಮತ್ತು ಬ್ರಿಟನ್ ಆಗಿವೆ. ರಷ್ಯಾವನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಿಸಲು ನಾವು ಬಯಸುತ್ತೇವೆ ಹಾಗೂ ಪ್ರತ್ಯೇಕಿಸಲು ನಾವು ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ.