ಮದುವೆ ಮನೆಗಳಲ್ಲಿ ಗಂಡು ಬೇರೊಬ್ಬ ಯುವತಿಗೆ ತಾಳಿ ಕಟ್ಟುವುದು, ಮದುವೆಯಾಗುವ ವರನ್ನು ವಧು ಅಣ್ಣಾ ಎನ್ನುವುದು, ಹುಡುಗನಿಗೆ ತಾಳಿ ಕಟ್ಟಲು ಬರದೆ ಪರದಾಡುವಂತಹ ಅನೇಕ ಮದುವೆ ಮನೆಯ ತಮಾಷೆ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ವಧು ವರರು ಸಿಟ್ಟಿನಿಂದ ಹಾರ ಬದಲಾಯಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಮದುವೆ ಮನೆಯಲ್ಲಿ ವಧುವರರೇ ಕೇಂದ್ರಬಿಂದುವಾಗಿರುತ್ತಾರೆ. ಹೀಗಿರುವಾಗ ಅವರೇ ಸಿಟ್ಟಿನಿಂದ ಹಾರ ಎಸೆದುಕೊಂಡು ಮದುವೆಯಾಗಿರುವುದನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಘಂಟಾ ಎನ್ನುವ ಇನ್ಟಾಗ್ರಾಮ್ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ವಧು ಸಿಟ್ಟಿನಿಂದ ವರನಿಗೆ ಹಾರ ಹಾಕಿದ್ದಾಳೆ. ಹಾಗೇ ವರನೂ ಕೂಡ ಸಿಟ್ಟಿನಿಂದ ನಿಂತಲ್ಲೇ ವಧುವಿನ ಕುತ್ತಿಗೆಗೆ ಹಾರ ಎಸೆದಿದ್ದಾನೆ. ಈಗಲೇ ಹೀಗೆ ಮದುವೆಯಾದ ಮೇಲೆ ಗತಿ ಏನು?, ಪುಟಿನ್ಗೆ ಕೂಡ ಇಷ್ಟು ಅಹಂಕಾರ ಇರಲಿಕ್ಕಿಲ್ಲ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.