ಬೆಂಗಳೂರು: ‘ವಿಕ್ರಾಂತ್ ರೋಣ’ ಚಿತ್ರವು ಇಂಗ್ಲೀಷ್ ಭಾಷೆಯಲ್ಲೂ ಬಿಡುಗಡೆಯಾಗುತ್ತಿದ್ದು, ಚಿತ್ರದ ಇಂಗ್ಲೀಷ್ ವರ್ಷನ್ಗೆ ಕಿಚ್ಚ ಸುದೀಪ್ ಅವರು ಡಬ್ಬಿಂಗ್ ಮಾಡಿದ್ದಾರೆ. ಮೊದಲ ಕನ್ನಡದ ಸೂಪರ್ ಸ್ಟಾರ್ ಇಂಗ್ಲೀಷ್ ಭಾಷೆಗೆ ಡಬ್ಬಿಂಗ್ ಮಾಡುತ್ತಿರುವ ಹೆಗ್ಗಳಿಕೆಗೆ ಕಿಚ್ಚ ಸುದೀಪ್ ಪಾತ್ರರಾಗಿದ್ದು, ಈ ಮೂಲಕ ಸುದೀಪ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ನಿರ್ದೇಶಕ ಅನೂಪ್ ಭಂಡಾರಿ ಇಂಗ್ಲೀಷ್ ವರ್ಷನ್ಗೆ ಕಿಚ್ಚ ಸುದೀಪ್ ಸರ್ ಡಬ್ಬಿಂಗ್ ಕಂಪ್ಲೀಟ್ ಮಾಡಿದ್ದು, ಇಂಗ್ಲೀಷ್ನಲ್ಲಿ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರಕ್ಕೆ ಡಬ್ ಮಾಡಿದ ಕನ್ನಡದ ಮೊದಲ ಸೂಪರ್ ಸ್ಟಾರ್ ಹಾಗೂ ಭಾರತದ ಕೆಲವೇ ವ್ಯಕ್ತಿಗಳಲ್ಲಿ ಕಿಚ್ಚ ಸುದೀಪ್ ಒಬ್ಬರು ಎಂದಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಅನೂಪ್ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.