ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ತಂಡ ಸ್ಟಾರ್ ಬಾಲರ್ ಶೇನ್ ವಾರ್ನ್ ಹೃದಯಘಾತದಿಂದ ಶುಕ್ರವಾರ ಮೃತ ಪಟ್ಟಿದ್ದಾರೆ.
ಥೈಲ್ಯಾಂಡ್ನ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದಿದ್ದ ವಾರ್ನ್ ನವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇವರಿಗೆ 53 ವರ್ಷ ವಯಸ್ಸಾಗಿತ್ತು. ಥೈಲ್ಯಾಂಡ್ನಲ್ಲಿ ವಾಸವಾಗಿದ್ದ ವಾರ್ನ್ ಅನುಮಾನಾಸ್ಪದವಾಗಿ ಮೃತ ಪಟ್ಟಿದ್ದಾರೆ ಎಂದು ಆಸ್ಟ್ರೇಲಿಯಾ ಖಾಸಗಿ ಚಾನೆಲ್ಗಳು ವರದಿ ಮಾಡಿವೆ.
ಶೇನ್ ವಾರ್ನ್ 1992ರಲ್ಲಿ ಭಾರತದ ವಿರುದ್ಧ ತಮ್ಮ ಚೊಚ್ಚಲ ಪಂದ್ಯ ಆಡುವ ಮೂಲಕ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೆ 2 ವಿಕೆಟ್ ಪಡೆದ ವಾರ್ನ್, ತಮ್ಮ ಸ್ಪಿನ್ ಜಾದು ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದ್ದರು. 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಶೇನ್ ವಾರ್ನ್ ಕೂಡ ಸ್ಥಾನ ಪಡೆದಿದ್ದರು. ಇದೀಗ ಅವರ ನಿಧನ ಸುದ್ದಿ ತಿಳಿದು ಕ್ರಿಕೆಟ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.