Sunday, June 8, 2025

ಅಶ್ವಿನ್ ಅತೀ ಹೆಚ್ಚು ಬಾರಿ ಔಟ್ ಮಾಡಿದ ಆ ಕ್ರಿಕೇಟಿಗರು ಇವರೇ ನೋಡಿ..!

ಭಾನುವಾರ ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು 222 ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿ ಗೆಲುವನ್ನು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್ ಆರ್.ಅಶ್ವಿನ್ ಒಟ್ಟು 6 ವಿಕೆಟ್ ಪಡೆದು, ತಮ್ಮ 85 ಟೆಸ್ಟ್ ಕ್ರಿಕೆಟ್​ ಪಂದ್ಯಗಳಲ್ಲಿ ಒಟ್ಟು 436 ವಿಕೆಟ್ ಪಡೆದಿದ್ದಾರೆ. ಇವರ 436 ವಿಕೆಟ್‌ಗಳಲ್ಲಿ ಅತೀ ಹೆಚ್ಚು ಬಾರಿ ಔಟ್‌ ಆದ ಕ್ರಿಕೇಟಿರ ಪಟ್ಟಿ ಹೀಗಿದೆ:

  • ಮೊದಲ ಸ್ಥಾನ: ಇಂಗ್ಲೆಂಡ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್ – 11 ಬಾರಿ ಔಟ್‌
  • ಎರಡನೇ ಸ್ಥಾನ: ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ – 10 ಬಾರಿ ಔಟ್‌
  • ಮೂರನೇ ಸ್ಥಾನ: ಇಂಗ್ಲೆಂಡ್ ಮಾಜಿ ನಾಯಕ ಅಲಿಸ್ಟರ್ ಕುಕ್ – 9 ಬಾರಿ ಔಟ್‌
  • ನಾಲ್ಕನೇ ಸ್ಥಾನ: ನ್ಯೂಜಿಲೆಂಡ್​ನ ಟಾಮ್ ಲಾಥಮ್ – 8 ಬಾರಿ ಔಟ್‌
  • ಐದನೇ ಸ್ಥಾನ: ಆಸ್ಟ್ರೇಲಿಯಾದ ಎಡ್ ಕೋವನ್, ಇಂಗ್ಲೆಂಡ್​ನ ಜೇಮ್ಸ್ ಅಂಡರ್ಸನ್ ಹಾಗೂ ಶ್ರೀಲಂಕಾದ ಲಹಿರು ತಿರಿಮಿನ್ನೆ – 7 ಬಾರಿ ಔಟ್‌

ಅಶ್ವಿನ್ 436 ವಿಕೆಟ್‌ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ 434 ವಿಕೆಟ್ ಪಡೆದಿದ್ದ ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದಾರೆ. ಅಶ್ವಿನ್ ಟೀಮ್ ಇಂಡಿಯಾ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದರೆ, ಅತೀ ಹೆಚ್ಚು ಟೆಸ್ಟ್​ ವಿಕೆಟ್ ಪಡೆದ ವಿಶ್ವದ ಬೌಲರುಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles