ಬೆಳ್ಮಣ್: ಹ್ಯುಮಾನಿಟಿ ಸಂಸ್ಥೆಯ ಹೊಸ ಅಧಿಕೃತ ಕಛೇರಿ ಕಟ್ಟಡ ಮಾ.13 ರಂದು ಬೆಳ್ಮಣ್ಣಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕಾರಿ ಸಮಿತಿ ಜೊತೆ ಸಂಸ್ಥೆಯ ಅಭಿಮಾನಿಗಳು ಉಪವಾಸ ಕೈಗೊಳ್ಳುವುದು, ಸರ್ವಧರ್ಮ ಮೌನ ಪ್ರಾರ್ಥನೆ, ರಕ್ತದಾನ ಶಿಬಿರ(ರಕ್ತದಾನ ಮಾಡುವವರು ಮೊದಲು ನೊಂದಣಿ ಮಾಡಿಕೊಳ್ಳಬೇಕು), ದೇಹದಾನ/ ಅಂಗದಾನ/ ನೇತ್ರದಾನ ನೊಂದಣಿ, ಕೇಶದಾನ ಹಾಗೂ ಆಟಿಕೆದಾನ, ಬೆಳ್ಮಣ್ಣು ಮತ್ತು ಆಸುಪಾಸಿನ ಆಯ್ದ ಬಡಜನರಿಗೆ ‘ಹ್ಯುಮಾನಿಟಿ ಗಿಫ್ಟ್ ಪ್ಯಾಕ್ ವಿತರಣೆ, ರಸಮಂಜರಿ ಜೊತೆ ರಸದೌತಣ, ಸೌಹಾರ್ದತೆ ಸಾರುವ ‘ಫುಡ್ ಕೌಂಟರ್ಸ್’ ಕಾರ್ಯಯ್ರಮಗಳು ಕ್ರಮವಾಗಿ ನಡೆಯಲಿವೆ.
ಹೆಚ್ಚಿನ ವಿವರಗಳಿಗಾಗಿ ಮೊ.ಸಂಖ್ಯೆ 9480201111 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

