ಜೆರುಸಲೇಂ: ಸುಮಾರು ಮೂರು ದಶಕಗಳ ನಂತರ 4 ವರ್ಷದ ಮಗುವಿನಲ್ಲಿ ಪೋಲಿಯೊ ಪ್ರಕರಣ ಪತ್ತೆಯಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
1989ರ ನಂತರ ಪತ್ತೆಯಾದ ಮೊದಲ ಪೋಲಿಯೊ ಪ್ರಕರಣ ಇದಾಗಿದೆ ಎಂದು ಇಸ್ರೇಲ್‌ನ ಮಾಧ್ಯಮ ವರದಿ ಮಾಡಿದೆ. ಸರ್ಕಾರ ನಡೆಸುವ ಪೋಲಿಯೊ ಲಸಿಕೆ ಅಭಿಯಾನದಲ್ಲಿ ಈ ಮಗುವಿಗೆ ಲಸಿಕೆ ಹಾಕಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ಪ್ರಕರಣ ಪತ್ತೆಯಾದ ನಂತರ ಇಸ್ರೇಲ್‌ನ ಆರೋಗ್ಯ ಸಚಿವಾಲಯ ಎಚ್ಚೆತ್ತುಕೊಂಡು ಲಸಿಕೆ ಅಭಿಯಾನ ಸಂದರ್ಭದಲ್ಲಿ ಲಸಿಕೆ ಹಾಕಿಸದ ಮಕ್ಕಳಿಗೆ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.