ನವದೆಹಲಿ: ರಷ್ಯಾದ ತೈಲದ ಮೇಲೆ ಅಮೆರಿಕ ಹಾಗೂ ಯುರೋಪಿಯನ್ ಮಿತ್ರ ರಾಷ್ಟ್ರಗಳು ನಿಷೇಧ ಹೇರಲು ಆಲೋಚನೆ ಮಾಡುತ್ತಿರುವ ಸುದ್ದಿಯ ಬೆನ್ನಲ್ಲೇ ಕಚ್ಚಾ ತೈಲ ದರವು ಮತ್ತೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77ರ ಸಮೀಪ ಸೋಮವಾರ ತಲುಪಿದೆ.
ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ವಿರುದ್ಧ ಇಂದು ಆರಂಭಿಕ ವಹಿವಾಟಿನಲ್ಲಿ 76.92ಗೆ ತಲುಪಿದ್ದರೆ, ಮಧ್ಯಾಹ್ನ 12.11ಗಂಟೆ ಸುಮಾರಿಗೆ 76.96ಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ರಷ್ಯಾ ಹಾಗೂ ಉಕ್ರೇನ್ ಯುದ್ಧವು ಪರಿಣಾಮ ಬೀರುತ್ತಿದೆ. ಭಾರತದ ಹಣದುಬ್ಬರವನ್ನು ಹೆಚ್ಚಿಸುವುದರ ಜೊತೆಗೆ ದೇಶದ ವ್ಯಾಪಾರ, ಚಾಲ್ತಿ ಖಾತೆ ಕೊರೆತೆಯನ್ನೂ ಹೆಚ್ಚಿಸುತ್ತಿದೆ.