ಮಾಸ್ಕೋ: ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ರಷ್ಯಾಗೆ ತನ್ನ ಉತ್ಪನ್ನಗಳ ರಫ್ತು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ದಕ್ಷಿಣ ಕೊರಿಯಾ ಮೂಲದ ಸ್ಯಾಮ್ ಸಂಗ್ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಆಪಲ್, ಮೈಕ್ರೊಸಾಫ್ಟ್ ಕಂಪನಿಗಳು ತನ್ನ ಉತ್ಪನ್ನಗಳ ರಫ್ತು ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಇದೀಗ ಈ ಸಾಲಿಗೆ ಸ್ಯಾಮ್ ಸಂಗ್ ಕಂಪನಿ ಸೇರ್ಪಡೆಗೊಂಡಿದೆ.