ಕೊಪ್ಪಳ: ಹೆಚ್ಚೆಂದರೆ ಬೈಕ್ನಲ್ಲಿ ಮೂರು ಅಥವಾ ನಾಲ್ಕು ಮಂದಿ ತೆರಳಬಹುದು. ಆದರೆ ಒಂದು ಬೈಕ್ ನಲ್ಲಿ ಸವಾರನೂ ಸೇರಿದಂತೆ ಬರೋಬ್ಬರಿ 9 ಮಂದಿ ಪ್ರಯಾಣಿಸಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಕೊಪ್ಪಳ ತಾಲೂಕಿನ ಗಿಣಗೇರಾದಿಂದ ಗಂಗಾವತಿಗೆ ನಾಲ್ಕು ಮಂದಿ ವಯಸ್ಕರು ಹಾಗೂ ಐದು ಮಂದಿ ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಒಂದೇ ಬೈಕ್ನಲ್ಲಿ ಪ್ರಯಾಣ ಮಾಡಿದ್ದಾರೆ. ಸ್ಥಳೀಯರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಈ ಸವಾರಿಯು ಎಲ್ಲರ ಗಮನ ಸೆಳೆದಿದೆ.