ಹೈದ್ರಾಬಾದ್: ತಂತ್ರಜ್ಞಾನ ಮುಂದುವರೆದಿರುವುದರಿಂದ ಅಪಾಯ ಅಷ್ಟೇ ಅಲ್ಲದೇ ಲಾಭ ಕೂಡ ಇದೆ ಎನ್ನುವುದಕ್ಕೆ ಹೈದ್ರಾಬಾದ್ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಹೈದ್ರಾಬಾದ್ನ ತನ್ನ ಮನೆಯಲ್ಲಿ ಮಾನಿಟರ್ ಸೆನ್ಸಾರ್ ಸಾಧನ ಒಳಗೊಂಡ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಅದರಂತೆ ಬುಧವಾರ ಮುಂಜಾನೆ ಮಾಲೀಕನ ಮೊಬೈಲ್ಗೆ ಎಚ್ಚರಿಕೆ ಕರೆ ಹೋಗಿದೆ. ಮನೆಯ ಹತ್ತಿರ ಕಳ್ಳನೊಬ್ಬ ಓಡಾಡುತ್ತಿರುವುದನ್ನು ಗಮನಿಸಿ, ನೆರೆಮನೆಯವರಿಗೆ ಕರೆ ಮಾಡಿದ್ದಾರೆ. ನೆರೆಮನೆಯವರು ಮನೆ ಬಾಗಿಲು ತೆರೆದಿರುವುದನ್ನು ಕಂಡು ಮನೆ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕಳ್ಳನಿಗೆ ಶರಣಾಗುವಂತೆ ತಿಳಿಸಿದ್ದಾರೆ. ಕಳ್ಳ ಬಾಗಿಲು ತೆಗೆಯದ ಕಾರಣ ಪೊಲೀಸರು ಕಿಟಕಿ ಒಡೆದು ಕಳ್ಳನನ್ನು ಬಂಧಿಸಿದ್ದಾರೆ. ಸೋಫಾ ಕೆಳಗೆ ಕಳ್ಳ ಬಚ್ಚಿಟ್ಟ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕೂತು ಹೈದ್ರಾಬಾನ್ನ ತನ್ನ ಮನೆಗೆ ನುಗ್ಗಿದ ಕಳ್ಳನನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಮಾಲೀಕ ಯಶಸ್ವಿಯಾಗಿದ್ದಾನೆ.
ಕಳ್ಳ