ಗುಂಡ್ಯಡ್ಕ: ಕಾರ್ಕಳದ ಗುಂಡ್ಯಡ್ಕದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಕಿಡಿಗೇಡಿಗಳು ಒಳನುಗ್ಗಿ ನಾಲ್ಕು ಲಕ್ಷ ಮೌಲ್ಯ ಸ್ವತ್ತನ್ನು ಹಾನಿ ಮಾಡಿದ ಘಟನೆ ಸೋಮವಾರ ನಡೆದಿದೆ.


ಟಾಟಾ ಸಹಭಾಗಿತ್ವದೊಂದಿಗೆ ಉನ್ನತಿಕರಣಗೊಂಡ ಪ್ರಾಯೋಗಿಕ ಕಟ್ಟಡದ ಹಾಗೂ ಟೆಕ್ನಾಲಜಿ ಲಾಜ್ಯ ಕಟ್ಟಡದ ಎಲ್ಲಾ ಕಿಟಕಿ ಬಾಗಿಲನ್ನು ಕಿಡಿಗೇಡಿಗಳು ಒಡೆದಿದ್ದಾರೆ. ಹಾಗೂ ಸಂಸ್ಥೆಯ ಶಟರ್ ಬೀಗ ಒಡೆದು ಒಳನುಗ್ಗಿ ನಾಲ್ಕು ಲಕ್ಷ ಮೌಲ್ಯದ ಸ್ವತ್ತನ್ನು ಹಾನಿ ಮಾಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.