ಬೆಂಗಳೂರು: ಲವ್ ಮಾಕ್ಟೇಲ್ ಚಿತ್ರದ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಅವರು ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಈ ಸಿನಿಮಾಗಳೆಲ್ಲವೂ ಒಂದರ ಹಿಂದೊಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದೀಗ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ‘ಲೋಕಲ್ ಟ್ರೈನ್’ ಚಿತ್ರವು ಏ.1ರಂದು ರಾಜ್ಯಾದ್ಯಂತ ಬಿಡುಗಡೆಗೆಯಾಗುತ್ತಿದೆ.
ಸುಬ್ರಾಯ ವಾಳ್ಕೆ ನಿರ್ಮಾಣ ಮಾಡಿದ್ದು, ರುದ್ರಮುನಿ ನಿರ್ದೇಶನ ಹಾಗೂ ಪಿ.ಆರ್ ಸೌಂದರ್ ರಾಜ್ ಸಂಕಲನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ರಮೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಎಸ್ತರ್ ನರೋನಾ, ಮೀನಾಕ್ಷಿ ದೀಕ್ಷಿತ್, ಸಾಧುಕೋಕಿಲಾ, ಭಜರಂಗಿ ಲೋಕಿ ಹಾಗೂ ಟೆನ್ನಿಸ್ ಕೃಷ್ಣ ಮುಂತಾದವರ ತಾರಾಬಳಗವಿದೆ.