ಮಂಗಳೂರು: ಎಂಸಿಸಿ ಬ್ಯಾಂಕ್‌ನ ಮಹಿಳಾ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬ್ಯಾಂಕ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ದಿನಾಚರಣೆಯನ್ನು ಮಂಗಳೂರಿನ ಎಂಸಿಸಿ ಬ್ಯಾಂಕ್‌ನ ಆಡಳಿತ ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು.
ಕರ್ಣಾಟಕ ಬ್ಯಾಂಕ್ ಲಿ. ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾಜಿ ಸೀನಿಯರ್ ಮ್ಯಾನೇಜರ್ ಮೇಜರ್ ಟೆಕ್ಸೀರಾ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಈ ಸಂದರ್ಭ ಬ್ಯಾಂಕಿನ ಮಹಿಳಾ ನಿರ್ದೇಶಕರಾದ ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಎಫ್ ಡಿಸೋಜಾ, ಮಹಿಳಾ ಶಾಖೆಯ ವ್ಯವಸ್ಥಾಪಕರಾದ ಜೆಸಿಂತಾ ಸೆರಾವ್, ಎಡ್ನಾ ನೊರೊನ್ಹಾ, ಬ್ಲಾಂಚೆ ಫೆರ್ನಾಂಡಿಸ್, ಸುನಿತಾ ಡಿಸೋಜಾ, ಐಡಾ ಪಿಂಟೋ, ಜೆಸಿಂತಾ ಫೆರ್ನಾಂಡಿಸ್ ಮತ್ತು ವಿಲ್ಮಾ ಜ್ಯೋತಿ ಸಿಕ್ವೇರಾ ಉಪಸ್ಥಿತರಿದ್ದರು.