ಚೀನಾ ಮೂಲದ ಪ್ರಸಿದ್ಧ ಕಂಪನಿ ಶವೋಮಿ ಬಹುನಿರೀಕ್ಷಿತ ರೆಡ್ಮಿ ಕೆ50 ಸರಣಿಯ ರೆಡ್ಮಿ ಕೆ50 ಹಾಗೂ ರೆಡ್ಮಿ ಕೆ50 ಪ್ರೋ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.
ರೆಡ್ಮಿ ಕೆ50 ಹಾಗೂ ರೆಡ್ಮಿ ಕೆ50 ಪ್ರೋ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್, ಫಾಸ್ಟ್ ಚಾರ್ಜಿಂಗ್ ಸಪೋರ್ಟ್, ಬಿಗ್ ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. ರೆಡ್ಮಿ ಕೆ50 ಫೋನ್ಗೆ ಸುಮಾರು ರೂ. 28,700 ಹಾಗೂ ರೆಡ್ಮಿ ಕೆ50 ಪ್ರೋ ಫೋನ್ಗೆ ಸುಮಾರು 35,900 ರೂ. ಇದೆ.
ರೆಡ್ಮಿ ಕೆ50 ಹಾಗೂ ರೆಡ್ಮಿ ಕೆ50 ಪ್ರೋ ಸ್ಮಾರ್ಟ್ ಫೋನ್ಗಳು ಡಿಮ್ ಲೈಟ್, ಫ್ಯಾಂಟಸಿ, ಇಂಕ್ ಫೆದರ್ ಮತ್ತು ಸಿಲ್ವರ್ ಟ್ರೇಸಸ್ ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಈ ಸ್ಮಾರ್ಟ್ ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ.