ಕಾಪು: ಮಲ್ಲಾರು ಪಕೀರಕಟ್ಟೆಯ ಗುಜರಿ ಅಂಗಡಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಿಂದ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಗುಜರಿ ಅಂಗಡಿಯ ಕಾರ್ಮಿಕರಾದ ನಯಾಜ್ ಮತ್ತು ಈರಪ್ಪ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಗುರುವಾರ ಮುಂಜಾನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅಂಗಡಿಯಲ್ಲಿ ಗುಜರಿಗೆಂದು ಬಂದಿದ್ದ ಗ್ಯಾಸ್ ಸಿಲಿಂಡರ್ ಸೋಮವಾರ ಸ್ಫೋಟವಾಗಿ ಈ ಅವಘಡ ಸಂಭವಿಸಿತ್ತು. ಸ್ಫೋಟದಲ್ಲಿಅಂಗಡಿ ಪಾಲುದಾರ ರಜಬ್, ಮ್ಯಾನೇಜರ್ ರಜಬ್ ಅಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ನಯಾಜ್, ಈರಪ್ಪ, ಹಸನಬ್ಬ, ವೀರೇಶ್ ಹಾಗೂ ಫಹೀಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.


