ಐಪಿಎಲ್ 2022: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬರೀ ಭಾರತದಲ್ಲಿ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿದೆ. ಈ ಬಾರಿಯ ಐಪಿಎಲ್ ಬರೋಬ್ಬರಿ 120ಕ್ಕೂ ಅಧಿಕ ದೇಶಗಳಲ್ಲಿ ನೇರಪ್ರಸಾರ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಸ್ಟಾರ್ ನೆಟ್ವರ್ಕ್ನ ವಿವಿಧ ವಾಹಿನಿಗಳ ಮೂಲಕ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಸ್ಟಾರ್ ನೆಟ್ವರ್ಕ್ ಹಾಗೂ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ, ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ, ವಿಶ್ಲೇಷಣೆ ಲಭ್ಯವಿರುತ್ತದೆ.