ಪುಣೆ: ಬೆಕ್ಕು ಮಾಡಿದ ಎಡವಟ್ಟಿಗೆ ಸ್ವತಃ ತಾನೂ ಪ್ರಾಣ ಕಳೆದುಕೊಂಡು ಸುಮಾರು 100 ಕೋಟಿ ರೂಪಾಯಿ ನಷ್ಟ ಮಾಡಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮಹಾರಾಷ್ಟ್ರ ವಿದ್ಯುತ್ ಪ್ರಸರಣ ನಿಗಮಕ್ಕೆ ಸೇರಿದ ಹೈವೋಲ್ಟೇಜ್ 220 ಕೆವಿ ಸಬ್ ಸ್ಟೇಷನ್ ಭೋಶರಿಯಲ್ಲಿದೆ. ಒಂದು 75ಎಂವಿಎ ಸಾಮರ್ಥ್ಯ ಹಾಗೂ ಎರಡು 100ಎಂವಿಎ ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ಗಳಿವೆ. ಎರಡು ಟ್ರಾನ್ಸ್ಫಾರ್ಮರ್ಗಳು ಎಂಎಸ್ಇಡಿಸಿಎಲ್ ಅಡಿಯಲ್ಲಿ ಒಟ್ಟು 26 ವಿದ್ಯುತ್ ಲೈನ್ಗಳಿಗೆ ವಿದ್ಯುತ್ ಪೂರೈಸುತ್ತವೆ. ಈ ಟ್ರಾನ್ಸ್ಫಾರ್ಮರ್ಗೆ ಬೆಕ್ಕು ಹತ್ತಿದ ಪರಿಣಾಮ ಶಾರ್ಟ್ ಸಕ್ಯೂಟ್ ಉಂಟಾಗಿ, ಬೆಕ್ಕು ಸಾಯುವ ಜೊತೆಗೆ ಟ್ರಾನ್ಸ್ಫಾರ್ಮರ್ ಸಹ ಸುಟ್ಟು ಹೋಗಿದೆ.
ಪರಿಣಾಮ 10 ವಿದ್ಯುತ್ ತಂತಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು 60ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸುಮಾರು 7ಸಾವಿರ ವ್ಯಾಪಾರಿಗಳಿಗೆ ವಿದ್ಯುತ್ ಕಡಿತ ಸಂಕಷ್ಟ ತಂದಿದ್ದು, ವಿದ್ಯುತ್ ಕೊರತೆಯಿಂದ ಸುಮಾರು 100ಕೋಟಿ ರೂಪಾಯಿ ನಷ್ಟವಾಗಿದೆ.