ಬೆಂಗಳೂರು: ವಿಮಾನ ಪ್ರಯಾಣದ ವೇಳೆ ಕಳೆದುಕೊಂಡು ಬ್ಯಾಗ್ ಹುಡುಕಲು ಹೋಗಿ ಪ್ರಯಾಣಿಕನೊಬ್ಬ ಇಂಡಿಗೋ ವಿಮಾನಯಾನ ಸಂಸ್ಥೆಯ ವೆಬ್ಸೈಟ್ ಅನ್ನೇ ಹ್ಯಾಕ್ ಮಾಡಿದ ಘಟನೆ ನಡೆದಿದೆ.
ಪಾಟ್ನಾದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಟೆಕ್ಕಿ ನಂದನ್ ಕುಮಾರ್ ಹ್ಯಾಕ್ ಮಾಡಿದ ವ್ಯಕ್ತಿ. ಸಹ ಪ್ರಯಾಣಿಕರೊಬ್ಬರು ಈತನ ಬ್ಯಾಗ್ ಅನ್ನು ತಪ್ಪಾಗಿ ತೆಗೆದುಕೊಂಡು ಹೋಗಿದ್ದು, ವೆಬ್ಸೈಟ್ ಹ್ಯಾಕ್ ಮಾಡಿ ಸಹಪ್ರಯಾಣಿಕನ ಫೋನ್ ನಂಬರ್ ಪಡೆದು ಈ ಕೃತ್ಯ ಎಸಗಿರುವುದಾಗಿ ನಂದನ್ ಟ್ವೀಟ್ ಮಾಡಿದ್ದಾನೆ.
ಟ್ವೀಟ್ನಲ್ಲಿ ‘ನಾನು ಮನೆ ತಲುಪಿದ ಬಳಿಕ ಪತ್ನಿಯಿಂದ ಬ್ಯಾಗ್ ಅದಲು ಬದಲಾಗಿರುವ ಬಗ್ಗೆ ಗೊತ್ತಾಗಿದ್ದು, ತಕ್ಷಣ ಇಂಡಿಗೋ ಸಂಸ್ಥೆ ಕಸ್ಟಮರ್ ಕೇರ್ಗೆ ಕರೆ ಮಾಡಿದ್ದು, ಗೌಪ್ಯತೆ ಮತ್ತು ಡೇಟಾ ರಕ್ಷಣೆ ಉಲ್ಲೇಖಿಸಿ ಸಹಪ್ರಯಾಣಿಕನ ನಂಬರ್ ಕೊಡಲು ನಿರಾಕರಿಸಿದ್ದಾರೆ. ಇಂಡಿಗೋ ಸಂಸ್ಥೆ ವೆಬ್ಸೈಟ್ನಲ್ಲಿ ನಮಗೆ ಅಗತ್ಯವಿರುವ ಸೂಕ್ಷ್ಮ ಮಾಹಿತಿ ಸುಲಭವಾಗಿ ಪಡೆದುಕೊಳ್ಳಬಹುದು. ವೆಬ್ ಸೈಟ್ ತಾಂತ್ರಿಕವಾಗಿ ದುರ್ಬಲವಾಗಿದ್ದು, ವೆಬ್ಸೈಟ್ಅನ್ನು ಇನ್ನಷ್ಟು ಭದ್ರಪಡಿಸಬೇಕು ಎಂದು ನಂದನ್ ತಿಳಿಸಿದ್ದಾರೆ.