Sunday, June 8, 2025

ಕೆಫೆಯಲ್ಲಿ ಯುವತಿಯರ ಹೊಡೆದಾಟ; ಜಗಳ ಬಿಡಿಸಲು ಯುವಕರ ಪರದಾಟ

ಮಂಗಳೂರು: ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಟ ಮಾಡಿಕೊಂಡು, ಇವರ ಜಗಳ ಬಿಡಿಸಲು ಯುವಕರು ಪರದಾಡಿದ ಘಟನೆ ಮಂಗಳೂರಿನ ಬಾವುಟಗದ್ದೆಯ ಯೆನ್ ಕೆಫೆಯಲ್ಲಿ ನಡೆದಿದೆ.
ಯುವಕರ ಜೊತೆ ಕೆಫೆಯಲ್ಲಿ ಕುಳಿತಿದ್ದ ಯುವತಿ ಮೇಲೆ ಕೆಫೆಗೆ ಬಂದ ಮತ್ತೊಬ್ಬ ಯುವತಿ ಏಕಾಏಕಿ ಹಲ್ಲೆ ಮಾಡಿದ್ದಾಳೆ. ಈ ವೇಳೆ ಕೆಫೆಯಲ್ಲಿದ್ದ ಮತ್ತೊಬ್ಬ ಯುವತಿ ಗಲಾಟೆ ಪ್ರಾರಂಭಿಸಿದ್ದು, ಒಟ್ಟು ಮೂವರು ಯುವತಿಯರು ಜಗಳವಾಡಲು ಶುರುಮಾಡಿದ್ದಾರೆ.

ಈ ಯುವತಿಯರ ಜಗಳ ಬಿಡಿಸಲು ಯುವಕರು ಪರದಾಡಿದ್ದು, ಈ ಬಗ್ಗೆ ಮಂಗಳೂರಿನ ಪೂರ್ವ ಠಾಣೆ ಪೊಲೀಸರು ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ. ಇದೀಗ ಯುವತಿಯರ ಜಗಳದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles