Monday, June 9, 2025

ನೀರಿನ ಟ್ಯಾಂಕ್‌ಗೆ ಬಿದ್ದ ಕಾಡುಕೋಣ: ವಿಟ್ಲದ ಅರಣ್ಯಾಧಿಕಾರಿಗಳಿಂದ ರಕ್ಷಣಾ ಕಾರ್ಯ

ವಿಟ್ಲ: ಕಾಡಿನಿಂದ ನೀರು ಕುಡಿಯಲು ಬಂದ ಕಾಡುಕೋಣಯೊಂದು ನೀರಿನ ಟ್ಯಾಂಕ್‌ಗೆ ಬಿದ್ದ ಘಟನೆ ವಿಟ್ಲದ ಕನ್ಯಾನದಲ್ಲಿ ನಡೆದಿದೆ.
ಕಳೆಂಜೆಮಲೆ ರಕ್ಷಿತಾರಣ್ಯ ಕಾಡಿನಿಂದ ಕಾಡುಕೋಣ ನೀರು ಹುಡುಕಿಕೊಂಡು ನಾಡಿಗೆ ಬಂದಿದೆ. ಈ ವೇಳೆ ಕನ್ಯಾನ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್‌ನಲ್ಲಿ ನೀರು ಕುಡಿಯಲು ಯತ್ನಿಸಿದಾಗ ನೇರವಾಗಿ ಕೋಣ ಟ್ಯಾಂಕ್‌ಗೆ ಜಾರಿ ಬಿದ್ದಿದೆ. ಇದರಿಂದ ಮೇಲೆ ಏಳಲಾಗದೇ ಕೋಣ ಟ್ಯಾಂಕ್‌ನೊಳಗಡೆ ಸಿಲುಕಿಕೊಂಡಿದೆ.
ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಬೆಳಿಗ್ಗೆ ಆಶ್ರಮ ನಿವಾಸಿಗಳು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಶಾಖೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಕಾರ್ಯಾಚರಣೆ ಮುಂದುವರಿಸಿದ್ದಾರೆ. ಟ್ಯಾಂಕ್‌ನಿAದ ನೀರು ಖಾಲಿ ಮಾಡಲಾಗುತ್ತಿದ್ದು, ಅದರ ಮೂಲಕ ಕೋಣವನ್ನು ರಕ್ಷಿಸಲಾಗುತ್ತದೆ. ಟ್ಯಾಂಕ್ ೫ಅಡಿ ಆಳವಿದ್ದು, ಕೋಣಕ್ಕೆ ಯಾವುದೇ ಗಾಯಗಳಾಗಿಲ್ಲ ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles