ಬೆಂಗಳೂರು: ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಮೋಹನ್ ಜುನೇಜ ನಿಧನ ಹೊಂದಿದ್ದಾರೆ. ಹೆಸರುಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾರೆ.
ಹೆಸರುಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾರೆ. ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವದಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಇದಾದ ನಂತರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಮೋಹನ್ ಹಾಸ್ಯ ನಟನಾಗಿ ಮಿಂಚಿದ್ದರು.
ಮೋಹನ್ ಜುನೇಜಾ ಒಬ್ಬ ಭಾರತೀಯ ಚಲನಚಿತ್ರ ನಟ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಮೋಹನ್ ಅವರು ಕೆಜಿಎಫ್ ಅಧ್ಯಾಯ 2 ಚಲನಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಅನಾರೋಗ್ಯ ಸಮಸ್ಯೆ ಹೆಚ್ಚಾದ ಹಿನ್ನೆಲೆ ಕುಟುಂಬದವರು ಚಿಕ್ಕಬಾಣವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಅದರೆ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೋಹನ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
‘ವಠಾರ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮೋಹನ್ ನಟಿಸಿದ್ದರು. ಕಿರುತೆರೆ ಮೂಲಕ ಬೆಳಕಿಗೆ ಬಂದ ಮೋಹನ್ ಆ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ವಿಧಿವಶ
Subscribe
Login
0 Comments