ಮಂಗಳೂರು: ಇಲ್ಲಿನ ನಗರದ ರಸ್ತೆಯೊಂದರಲ್ಲಿ ಒಂದೇ ಬೈಕ್ನಲ್ಲಿ ಐವರು ತೆರಳುತ್ತಿರುವ ವಿಡಿಯೋವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದಾರೆ. ಅಲ್ಲದೇ, ಮಂಗಳೂರು ನಗರ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಒಂದೇ ಬೈಕಿನಲ್ಲಿ ಐದು ಮಂದಿ ಕುಳಿತಿದ್ದಾರೆ. ಇಬ್ಬರು ದೊಡ್ಡವರು, ಮೂವರು ಸಣ್ಣ ಮಕ್ಕಳು. ಇದರಲ್ಲಿ ಒಂದು ಮಗು ಟ್ಯಾಂಕ್ ಮೇಲೆ ಕುಳಿತುಕೊಂಡಿದ್ದು, ಒಂದು ಮಗು ಮಲಗಿಕೊಂಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಚಾರದಲ್ಲಿ ಡಿಸಿಪಿ ಅಪರಾಧ ಮತ್ತು ಸಂಚಾರ ಮಂಗಳೂರು ನಗರ ಪೊಲೀಸರು ಮಧ್ಯ ಪ್ರವೇಶಿಸಬೇಕು. ಇಂತಹ ಅಪಾಯಕಾರಿ ಸವಾರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ
ಒಂದೇ ಬೈಕ್ನಲ್ಲಿ ಐವರು ತೆರಳುತ್ತಿರುವ ವಿಡಿಯೋ ಹರಿಬಿಟ್ಟ ಶಾಸಕ ವೇದವ್ಯಾಸ ಕಾಮತ್
Subscribe
Login
0 Comments