ಬೆಳ್ತಂಗಡಿ: ಸಂಘದ ಹಿರಿಯರು ಸೂಚಿಸಿದ್ರೆ ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತೇನೆ. ಆದರೆ ಆಗ ಧೈರ್ಯದಿಂದ ಹೇಳುತ್ತೇನೆ ನನಗೆ ಮುಸ್ಲಿಮರ ಮತ ಬೇಡ. ನನಗೆ ಕೇವಲ ಹಿಂದೂಗಳ ಓಟ್ ಅಷ್ಟೇ ಸಾಕು ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.
ಬೆಳ್ತಂಗಡಿಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುಸ್ಲಿಮರ ಮತ ಬೇಡ, ಹಿಂದೂಗಳ ಮತಗಳಷ್ಟೇ ಸಾಕು ಯಾಕೆಂದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು. ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು. ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣ ಆಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳ್ತೇನೆ ನನಗೆ ಮುಸ್ಲಿಮರ ಮತಗಳು ಬೇಡ ಎಂದರು. ಸದ್ಯ ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಕಾರಣವಾಗಿದೆ.