ಸುಳ್ಯ: ನಾವೂರು ಬೀಜಕೊಚ್ಚಿ ರಸ್ತೆಯಲ್ಲಿರುವ ವೆಂಕಟರಮಣ ಭಟ್ ಮಾಸ್ಟರ್ ಅವರ ಮನೆಯ ಕಾಂಪೌAಡ್ ರಸ್ತೆಗೆ ಕುಸಿದುಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಈ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಪಾದಚಾರಿಗಳು ಯಾರು ಇಲ್ಲದ ಕಾರಣ ಅಪಾಯಗಳು ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.