Saturday, June 7, 2025

ತೂಕ ಇಳಿಸಲು ಕುಡಿಯಿರಿ ಈ ಸೂಪ್

ತಮ್ಮ ದೇಹದ ತೂಕ ಇಳಿಸಲು ಕೆಲವರು ಸಾಹಸವನ್ನು ಮಾಡುತ್ತಿರುತ್ತಾರೆ. ಅಂತಹವರು ನಾವು ಹೇಳುವ ಸೂಪ್ ಅನ್ನು ಮಾಡಿ ಕುಡಿಯುವುದರಿಂದ ಸುಲಭವಾಗಿ ದೇಹದ ತೂಕವನ್ನು ಇಳಿಸಿಕೊಳ್ಳ ಬಹುದು. ಈ ಸೂಪ್ ಮಾಡೋದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಸೂಪ್ ಮಾಡಲು ಬೇಕಾಗುವ ಸಾಮಾಗ್ರಿಗಳು:

ಸಣ್ಣಗೆ ಹೆಚ್ಚಿದ ಎಲೆ ಕೋಸು 2 ಚಮಚ

ಸಣ್ಣಗೆ ಹೆಚ್ಚಿದ ಕ್ಯಾರೋಟ್ 2 ಚಮಚ

ಸಣ್ಣಗೆ ಹೆಚ್ಚಿದ ಬೀನ್ಸ್ 5

ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 2

ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸಿನಕಾಯಿ 2 ಚಮಚ

ಎಣ್ಣೆ 2 ಚಮಚ

ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ 1 ಚಮಚ

ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಈರುಳ್ಳಿ 4 ಚಮಚ

ಓಟ್ಸ್ ಅರ್ಧ ಕಪ್

ಅರ್ಧ ಚಮಚ ಮೆಣಸಿನಕಾಳಿನ ಪುಡಿ

ನಿಂಬೆ ಹಣ್ಣಿನ ರಸ ಅರ್ಧ ಚಮಚ

ಮಾಡೋದು ಹೇಗೆ?

ಮೊದಲಿಗೆ ಎರಡುವರೆ ಕಪ್ ನೀರು ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಎಲೆ ಕೋಸು 2 ಚಮಚ, ಸಣ್ಣಗೆ ಹೆಚ್ಚಿದ ಕ್ಯಾರೋಟ್ ಚಮಚ, ಸಣ್ಣಗೆ ಹೆಚ್ಚಿದ ಬೀನ್ಸ್ 5, ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸಿನಕಾಯಿ 2 ಚಮಚ ಹಾಕಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 2, ಉಪ್ಪು ಸ್ವಲ್ಪ ಹಾಕಿ ತಟ್ಟೆಯನ್ನು ಮುಚ್ಚಿ 10 ರಿಂದ 15 ನಿಮಿಷ ಕುದಿಸಿ, ನೀರು ತೆಗೆದು ತರಕಾರಿಯನ್ನು ಎತ್ತಿಟ್ಟುಕೊಳ್ಳಿ.

ನಂತರ ಒಂದು ಬಾಣಲಿಗೆ 2 ಚಮಚ ಎಣ್ಣೆ ಹಾಕಿ ಅದು ಬಿಸಿ ಆದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ 1 ಚಮಚ, ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಈರುಳ್ಳಿ 2 ಚಮಚ ಹಾಕಿ ಚೆನ್ನಾಗಿ ಹುರಿಯಿರಿ.

ತದನಂತರ ಬಾಣಲಿಗೆ ಕಪ್ ಹಾಕಿ 2 ನಿಮಿಷ ಹುರಿಯಿರಿ. ನಂತರ ಇದಕ್ಕೆ ಒಂದುವರೆ ಕಪ್ ನೀರು ಸೇರಿಸಿ ಚಮಚ ಮೆಣಸಿನಕಾಳಿನ ಪುಡಿ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ ಈಗಾಗಲೇ ಬೇಯಿಸಿ ಎತ್ತಿಟ್ಟುಕೊಂಡಿರುವ ತರಕಾರಿಯನ್ನು ಬಾಣಲಿಗೆ ಹಾಕಿ ಮೇಲೆ ಸ್ಪ್ರಿಂಗ್ ಈರುಳ್ಳಿ 2 ಚಮಚ ಹಾಕಿ 2 ನಿಮಿಷ ಕುದಿಸಿರಿ. ಕೊನೆಯಲ್ಲಿ ಅ ಚಮಚ ನಿಂಬೆ ಹಣ್ಣಿನ ರಸ ಅರ್ಧ ಚಮಚ ಹಾಕಿ ಕಲಸಿದರೆ ಆರೋಗ್ಯಕರವಾದ ಹಾಗೂ ತೂಕ ಇಳಿಸಿಕೊಳ್ಳಬಹುದಾದ ಓಟ್ಸ್ ಸೂಪ್ ತಯಾರಾಗುತ್ತದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles