ಬೆಂಗಳೂರು: ಶಿಕ್ಷಣ ಇಲಾಖೆಯು ದ್ವಿತೀಯಾ ಪಿಯುಸಿ ಪರೀಕ್ಷೆಯನ್ನು ಒಂದು ತಿಂಗಳು ಕಾಲ ತಡವಾಗಿ ಪ್ರಾರಂಭಿಸಲು ನಿರ್ಧಾರ ಮಾಡಿದೆ. ಈ ಬಾರಿಯ ಪರೀಕ್ಷೆಯನ್ನು ಮೇ-ಜೂನ್ ನಲ್ಲಿ ನಡೆಸಲು ಚಿಂತನೆ ಮಾಡಿದೆ. ಪಠ್ಯಕ್ರಮ ಪೂರ್ಣಗೊಳಿಸಲು ಸಮಯದ ಅಗತ್ಯ ಇರುವುದರಿಂದ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆ ಇದೆ.
ಮುಂದಿನ ವೃತ್ತಿಪರ ಕೋರ್ಸ್ ಗಳ ಆಯ್ಕೆಗೆ ದ್ವಿತೀಯ ಪಿಯುಸಿ ಅಂಕಗಳು ನಿರ್ಣಯಕವಾಗಿರುತ್ತದೆ. ಪಠ್ಯಕ್ರಮ ಪೂರ್ಣಗೊಳಿಸ ಇನ್ನು ಸಮಯ ಬೇಕಾಗಿರುವುದರಿಂದ ಸುಮಾರು ಒಂದು ತಿಂಗಳು ಪರೀಕ್ಷೆಯನ್ನು ತಡವಾಗಿ ಪ್ರಾರಂಭ ಮಾಡುವ ನಿರ್ಧಾರವನ್ನು ಶಿಕ್ಷಣ ಇಲಾಖೆ ತೆಗೆದುಕೊಳ್ಳುವ ಸಾಧ್ಯತೆ ಇದೆ.