ಮಾಸ್ಕೋ: ಉಕ್ರೇನ್ ರಷ್ಯಾ ಯುದ್ದ ನಡೆಯುತ್ತಿರುವ ಹಿನ್ನೆಲೆ ಪುಟಿನ್ ಬಗ್ಗೆ ಅನೇಕ ಚರ್ಚೆಗಳು ಪ್ರಾರಂಭವಾಗಿದೆ. ರಷ್ಯಾ ದೇಶದ ಒರ್ವ ಉದ್ಯಮಿ ಪುಟಿನ್ ತಲೆಗೆ ಬೆಲೆ ಕಟ್ಟಲು ಮುಂದಾಗಿದ್ದಾನೆ.
ರಷ್ಯಾ ಉದ್ಯಮಿ ಅಲೆಕ್ಸ್ ಕೊನಾನಿಖಿನ್ 1 ಮಿಲಿಯನ್ ಡಾಲರ್ ಹಣವನ್ನು ಪುಟಿನ್ ತಲೆ ಫಿಕ್ಸ್ ಮಾಡಿದ್ದಾನೆ. ಪುಟಿನ್ ಅವರನ್ನು ಜೀವಂತವಾಗಿ ಅಥವಾ ಶವವಾಗಿ ತಂದರೆ ಬಹುಮಾನವಾಗಿ 1 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿದ್ದಾನೆ. ಪುಟಿನ್ ಅವರನ್ನು ರಷ್ಯಾ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಅಪರಾಧಿ ಎಂದು ಬಂಧಿಸುವ ಮಿಲಿಟರಿ ಅಧಿಕಾರಿಗೆ ಈ ಆಫರ್ ನೀಡಲಾಗಿದೆ. ಈ ಬಗ್ಗೆ ಕೊನಾನಿಖಿನ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಇದೀಗ ಈತನ ಹೇಳಿಕೆ ಸಾಕಷ್ಟು ವೈರಲ್ ಆಗಿದೆ.
ಅಷ್ಟೇ ಅಲ್ಲದೆ ಪುಟಿನ್ ಅವರ ಬಗ್ಗೆ ಖಾರವಾಗಿ ಟೀಕಿಸಿದ್ದು ವಿಶೇಷ ಕಾರ್ಯಚರಣೆಯ ಮೂಲಕ ಪುಟಿನ್ ಅಧಿಕಾರಕ್ಕೆ ಬಂದರು. ನಂತರ ಮುಕ್ತ ಚುನಾವಣೆ ನಿಷೇಧಿಸುವ ಮೂಲಕ ತನ್ನ ವಿರೋಧಿಗಳನ್ನು ಕೊಂದು ಸಂವಿಧಾನದ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.