Sunday, June 8, 2025

ಆಫ್ರಿಕಾದ ಕೊಕ್ಕೋ ಬೀಜವನ್ನು ಥೈಲ್ಯಾಂಡ್‌ನ ಕೊಕ್ಕೋ ಬೀಜವೆಂದು ವಂಚಸಿದ ಆರೋಪಿ ಸೆರೆ

ಮಂಗಳೂರು: ಆಫ್ರಿಕಾ ದೇಶದ ಕೊಕ್ಕೋ ಬೀಜವನ್ನು ಥೈಲ್ಯಾಂಡ್ ದೇಶದ ಕೊಕ್ಕೋ ಬೀಜವೆಂದು ವಂಚಸಿದ ಆರೋಪಿಯನ್ನು ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುತ್ತೂರು ಪೊಲೀಸರು ಬಂದಿಸಿದ್ದಾರೆ.

ವಿನ್ಸಿ ಪಿಂಟೋ ಬಂಧಿತ ಆರೋಪಿ. ಹಾಗೂ ಮತ್ತೋರ್ವ ಆರೋಪಿ ಜೀವನ್ ಲೋಬೊ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಸಂಬಂಧ 2020ರ ಜೂ.20ನಲ್ಲಿ ಮಂಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿ ಜೀವನ್ ಲೋಬೋ ಕೋಸ್ಫಾಕ್ ಏಶಿಯಾ ಇಂಟರ್ ನ್ಯಾಷನಲ್ ಕಂ.ಲಿ ಎಂಬ ಕೊಕ್ಕೋ ಸರಬರಾಜು ಸಂಸ್ಥೆ ತೆರೆದಿದ್ದನು. ಈತ ದುಬೈ ದೇಶದಲ್ಲಿದ್ದ ವಿನ್ಸಿ ಪಿಂಟೋ ಸಹ ಮಾಲೀಕತ್ವದಲ್ಲಿ ಆಫ್ರಿಕಾ ದೇಶದಲ್ಲಿ ಬೆಳೆದ ಕೊಕ್ಕೋವನ್ನು ಥೈಲ್ಯಾಂಡ್ ದೇಶದ ಉತ್ಪನ್ನವೆಂದು ನಂಬಿಸಿ ಕೊಕ್ಕೋ ಬೀಜ ಸರಬರಾಜು ಮಾಡಿದ್ದರು. ಆರೋಪಿಗಳು ನಕಲಿ‌ ದಾಖಲೆ ಸೃಷ್ಟಿಸಿ ಖೋಟಾ ಗುರುತು ಮಾಡಿ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೆ ವಂಚಿಸಿದ್ದಾರೆ.

ಆರೋಪಿಗಳು ಒಟ್ಟು 9ಕೋಟಿ‌ 71ಲಕ್ಷದ 50ಸಾವಿರ 113ರೂ ವಂಚನೆ ಮಾಡಿರುವುದು 2019ರಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಳ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles