Sunday, June 8, 2025

ಬಲೆಗೆ ಬಿದ್ದ ಭಾರೀ ತೂಕದ ಮೀನು

ಮಲ್ಪೆ: ಮಲ್ಪೆಯ ಬಂದರಿನಲ್ಲಿ 60 ಕೆ.ಜಿ. ತೂಕದ ಮಡಲು ಮೀನು ಸನ್ಮಯ ಬೋಟಿನ ಬಲೆಗೆ ಬಿದ್ದಿದ್ದು, ಈ ಮೀನನ್ನು ನೋಡಲು ಜನರು ಜಮಾಯಿಸುತ್ತಿದ್ದಾರೆ.

ಮಡಲು ಮೀನು ಕೆ.ಜಿ.ಗೆ 120 ರುಪಾಯಿಯಂತೆ ಮಾರಾಟವಾಗಿದೆ. ಸಾಮಾನ್ಯವಾಗಿ 35 ಕೆ.ಜಿ. ವರೆಗೆ ಇರುವ ಈ ಮೀನು 60 ಕೆ.ಜಿ ಇರುವುದು ಅಪರೂಪ ಎಂದು ಮೀನು ವ್ಯಾಪಾರಿ ವಿಕ್ರಮ್ ತಿಳಿಸಿದ್ದಾರೆ.

ಮಡಲು ಮೀನಿಗೆ ವೈಜ್ಞಾನಿಕವಾಗಿ ಸೈಲ್‌ ಮೀನು ಎಂಬ ಹೆಸರಿದೆ. ಆದರೆ ಈ ಮೀನು ಮಡಲಿನ(ತೆಂಗಿನ ಸೋಗೆ) ಆಕಾರದಲ್ಲಿ ಇರುವುದರಿಂದ ಆಡು ಭಾಷೆಯಲ್ಲಿ ಮಡಲು ಮೀನು ಎಂದು ಕರೆಯಲಾಗುತ್ತದೆ. ಮಡಲು ಮೀನು ಬೇರೆಲ್ಲಾ ಮೀನುಗಳಿಗಿಂತ ವೇಗವಾಗಿ ಚಲಿಸುತ್ತದೆ ಅಂದರೆ ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಮೀನು ಬಂಗುಡೆ, ಬೂತಾಯಿ, ಅಕ್ಟೋಪಸ್ ಹೀಗೆ ಇನ್ನಿತರ ಮೀನುಗಳನ್ನು ತಿನ್ನುತ್ತದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles