Saturday, June 7, 2025

ತಲೆಗೆ ಚಿಕಿತ್ಸಕ ಹೊಡೆದ ಮೊಳೆ ತೆಗೆಯಲಾಗದೆ ಆಸ್ಪತ್ರೆಗೆ ಸೇರಿದ ಗರ್ಭಿಣಿ

ಪಾಕಿಸ್ತಾನ: ಮೂಡನಂಬಿಕೆಗಳಿಗೆ ದೇಶವೆಂಬುದಿಲ್ಲ, ಪ್ರಪಂಚದೆಲ್ಲೆಡೆ ಮೂಡನಂಬಿಕೆ ಇದೆ. ಕೆಲವೊಮ್ಮೆ ಮೂಡನಂಬಿಕೆಗಳಿಂದ ಪ್ರಾಣ ಹೋಗುವ ಸ್ಥಿತಿಯನ್ನು ಬಂದರೂ ಸಂಶಯವಿಲ್ಲ. ಇದೇ ಮೂಡನಂಬಿಕೆಯಿಂದ ಗರ್ಭಿಣಿಯೊಬ್ಬಳ ತಲೆಗೆ ಮೊಳೆ ಹೊಡೆದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನದ ಮಹಿಳೆಗೆ ಈಗಾಗಲೇ ಮೂರು ಹೆಣ್ಣು ಮಕ್ಕಳಿದ್ದು, ಆಕೆ ಮತ್ತೆ ಗರ್ಭಿಣಿಯಾಗಿದ್ದಾಳೆ. ಆದರೆ ಈ ಬಾರಿ ಗಂಡು ಮಗು ಹುಟ್ಟಲಿ ಎಂಬ ಕಾರಣಕ್ಕೆ ಅತೀಂದ್ರಿಯ ಸೂಫಿ ಚಿಕಿತ್ಸಕನಿಂದ ತಲೆಗೆ ಮೊಳೆ ಹೊಡೆಸಿಕೊಂಡಿದ್ದಾರೆ. ನೋವನ್ನು ತಾಳಲಾರದೇ ಮೊಳೆಯನ್ನು ಇಕ್ಕಳದಿಂದ ತೆಗೆಯಲು ಪ್ರಯತ್ನಿಸಿ ವಿಫಲವಾಗಿ ಪಾಕಿಸ್ತಾನದ ಪೇಶಾವರದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆಯ ತಲೆಯಿಂದ ಮೊಳೆಯನ್ನು ತೆಗೆದು ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯ ಹೈದರ್​ ಖಾನ್​ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾದ ಆಕೆಗೆ ಎಕ್ಸ್​ ರೇ ಮಾಡಿದಾಗ ತಲೆಯಲ್ಲಿ 2 ಇಂಚಿನ ಮೊಳೆ ಇರುವುದು ಪತ್ತೆಯಾಗಿದೆ. ಆಕೆಯ ಹಣೆಗಿಂತ ಸ್ವಲ್ಪ ಮೇಲ್ಭಾಗದಲ್ಲಿ ಮೊಳೆ ಹೊಡೆಯಲಾಗಿದ್ದು, ಅದೃಷ್ಟವಶಾತ್ ಆಕೆಯ ಮೆದುಳಿಗೆ ಮೊಳೆ ತಾಕಿರಲಿಲ್ಲ. ಗಂಡು ಮಗು ಬೇಕೆಂಬ ಆಸೆಯಿಂದ ವಾಮಾಚಾರಿ ಬಳಿ ತಲೆಗೆ ಮೊಳೆ ಹೊಡೆಸಿಕೊಂಡಿರುವುದಾಗಿ ಆಕೆ ವಿಚಾರಣೆ ವೇಳೆ ತಿಳಿಸಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles