ಬೆಂಗಳೂರು: ಪುನೀತ್ ರಾಜ್‌ಕುಮಾರ್ ನಿಧನಕ್ಕೂ ಮುನ್ನ ಹಲವು ಸಿನಿಮಾಗಳಲ್ಲಿ ನಟಿಸಲು ಒಪ್ಪಿಗೆ ನೀಡಿದ್ದರು. ಅವರ ನಿಧನದ ನಂತರ ಅವರು ಒಪ್ಪಿಕೊಂಡಿದ್ದ ಒಂದು ಸಿನಿಮಾ ಇದೀಗ ಕಿಸ್ ಸಿನಿಮಾ ನಾಯಕ ವಿರಾಟ್ ಅವರ ಪಾಲಾಗಿದೆ.
ನಿರ್ದೇಶಕ ದಿನಕರ್ ತೂಗುದೀಪ ಅವರು ಪುನೀತ್ ರಾಜ್‌ಕುಮಾರ್‌ಗೆ ನಿರ್ದೇಶನ ಮಾಡುವ ಸಲುವಾಗಿ ಕಥೆಯೊಂದನ್ನು ರಚಿಸಿದ್ದರು. ಆದರೆ ಅವರ ನಿಧನದ ನಂತರ ಸಿನಿಮಾಗೆ ನಟ ವಿರಾಟ್ ಅವರನ್ನು ಆಯ್ಕೆ ಮಾಡಲಾಗಿದೆ. ಹೆಸರಿಡದ ಈ ಸಿನಿಮಾದ ಶೂಟಿಂಗ್ ಮೇ ತಿಂಗಳಿನಲ್ಲಿ ಪ್ರಾರಂಭವಾಗಲಿದೆ.
ಇಂದು ನಟ ವಿರಾಟ್ ಜನ್ಮದಿನದ ಹಿನ್ನಲೆಯಲ್ಲಿ ಸಿನಿಮಾದ ಪೋಸ್ಟರ್‌ನನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವಿರಾಟ್ ಅವರ ಮೂರನೇ ಸಿನಿಮಾ ಇದಾಗಿದ್ದು, ಈ ಸಿನಿಮಾವು ಜಯಣ್ಣ-ಭೋಗೇಂದ್ರ ಕಂಬೈನ್ಸ್ ನಿರ್ಮಾಣದಲ್ಲಿ ಮೂಡಿಬರಲಿದೆ.