ಉಕ್ರೇನ್‌ನ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ವಿ.ವಿ.ಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತದ ಪಂಜಾಬ್‌ನ ಬರ್ನಾಲಾದವರಾದ ಚಂದನ್ ಜಿಂದಾಲ್ (22) ಅವರು ಬುಧವಾರ ಮೃತಪಟ್ಟಿದ್ದಾರೆ.
ಚಂದನ್‌ಗೆ ಇಸ್ಕೆಮಿಕ್ ಸ್ಟ್ರೋಕ್ (ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಪಾರ್ಶ್ವವಾಯು) ಆಗಿದ್ದು, ಅವರನ್ನು ವಿನ್ನಿಟ್ಸಿಯಾದ ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದು, ಚಂದನ್ ಕುಟುಂಬಕ್ಕೆ ಈಗಾಗಲೇ ವಿಷಯ ತಿಳಿಸಲಾಗಿದೆ. ಮೃತದೇಹವನ್ನು ಊರಿಗೆ ತರಲು ಸಹಾಯ ಮಾಡುವಂತೆ ಅವರ ತಂದೆ ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.